ರಾಜಕೀಯದಾಗೀಗ ವಂಡರ್ಮೆ ಥಂಡರ್

ಹೆಂಗಾತಪ್ಪಾ ಅಂದ್ರೆ ಕೊಮಾರಸ್ವಾಮಿ ಮಂತ್ರಿಮಂಡಲದ ವಿಸ್ತರಣೆ ಮಾಡಿ ಮೊದಲೇ ಉರಿತಿದ್ದ ಬೆಂಕಿಗೆ ತುಪ್ಪ ಹಾಕ್ದ ಅನ್ನಂಗಾಗೇತ್ ನೋಡ್ರಿ. ರೇವಣ್ಣನ್ನ ಮಂತ್ರಿ ಮಾಡಬೇಕಂತ ದೊಡ್ಡಗೋಡ್ರು ಯಾವಾಗ ಕಚ್ಚೆ ಕಟ್ಟಿಕ್ಯಂಡು ರಚ್ಚೆ ಹಿಡಿದ್ರೋ ತಡೆಯೋ ಗಂಡಾರ್ರಾ ಯಾರ್ರಿ? ಸೊಸಿ ಭವಾನಿ ಯಾವಾಗ ಸಾಕ್ಷಾತ್ ಅಂಬಾಭವಾನಿ ಆಗಿ ತ್ರಿಶೂಲ ಹಿಡ್ದು ಹೆದರಿಸ್ತಾ, ‘ಅನಿತಾಳ ಗಂಡ ಸಿ.ಎಂ. ಆಗಿ ಮೆರಿತಿರಬೇಕಾದರೆ… ನಾನ್ ಅಟ್ಲೀಸ್ಟ್ ಮಂತ್ರಿ ಹೆಂಡ್ರಾರ ಆಗದಿದ್ದ ಮ್ಯಾಗೆ ನೇಣು ಹಾಯ್ಕಂಡು ನೆಗ್ದು ಬಿದ್ದು ಹೋಗ್ತೀನಿ ಮಾವ ಅಂತಂದು ಭವಾನಿ ಫ್ಯಾನಿಗೆ ಸೀರೆ ಎಸೆಯುತ್ಲು ಐಸ್ನಂತೆ ಕರಗಿದ ಗೌಡಪ್ಪ ಮಂತ್ರಿ ಮಂಡಲದ ಇಸ್ತರಣೆಗೆ ಆಲ್ಡರ್ ಮಾಡಿದರು. ಅಸಲಿ ಸಿಯಮ್ಮು ಅವರೇ ತಾನೆ. ಹೂವಿನ ಜೊತೆ ನಾರೂ ಸ್ವರ್ಗ ಸೇರ‍ಕಂತು ಅನ್ನಂಗೆ ಎಂ.ಪಿ.ಪ್ರಕಾಸು ಇನ್ನೂ ಅರು ಮಂದಿಗೂ ಅದೃಷ್ಟ ಒದ್ಕಂಬಂದು ಮಂತ್ರಿಗಳು ಅಗೋದ್ರಪಾ. ಇನ್ನೇನು ಹದಿನೈದು ದಿನದಾಗೆ ಸರ್ಕಾರವೇ ಉಲ್ಡು ಹೋಯ್ತದೆ ಅಂತ್ಹೇಳಿ ಖುದ್ ಸಿ‌ಎಂನೇ ಅಳ್ಲಿಕ್ಕತಿದ್ದರಿಂದ ದಿಟವೆಂದೇ ನಂಬಿದ್ದ ಕಾಂಗ್ರೆಸ್ನೋವು ಚುನಾವಣೆ ಡ್ರೀಮ್ ಕಾಣ್ಲಿಕತ್ತಿದ್ವು. ನಿರಾಶೆಯಾಗೋದ ಕಾಂಗೈನೋವೀಗ ಬಿಐ‌ಎಂಸಿ ಯೋಜ್ನೆ ಗದ್ದಲ ಶುರು ಹಚ್ಕೊಂಡ್ವು. ನಿಂಗೆ ಯಾರು ಲಂಚದ ಆಶೆ ತೋರ್ದೋರು ಯಾವನವ? ಮಾಡಿ ಮಂತಿ, ಪೇಪರನೋನು? ಅಂತ ಬೆನ್ನು ಬಿದ್ವು. ‘ನಾನು ಆ ಮಾತು ಆಡೇ ಇಲ್ಲ. ಪೇಪರ್ನೋರು ಅಗ್ದಿ ಸುಳ್ಳರು’ ಅಂದ ಕುಮಾರ. ಅದುವರೆಗೂ ಕೆಂಡಕಾರಿದ್ದ ಕಾಂಗೈ ಬಡ್ಡೇತ್ತೋವು ಇದ್ದಿಲಾಗಿ ಅದ್ನೆ ನಂಬಿದಂಗೆ ಮಾಡಿ ಕೊಮಾರನ ಭುಜ ಚಪ್ಪರಿಸಿದ್ವು. ಮಂತ್ರಿಯಾಗದ ಅತೃಷ್ತ ಆತ್ಮಗಳೀಗ ಕೊಮಾರನ ಮ್ಯಾಲೆ ಕತ್ತಿ ಮಸಲಿಕತ್ತವೆ. ರಾಜಕೀಯನೇ ಹಂಗ್ ನೋಡ್ರಿ, ಸೂರ್ಯ ಹುಟ್ಟಿ ಮುಳುಗೋದ್ರಾಗೆ ತನ್ನ ಒರಿಜಿನಲ್ ಬಣ್ದನೇ ಬದಲಾಯಿಸ್ಕಂಬಿಡ್ತದೆ. ಈಗ್ಲೂ ಆದ್ದು ಹಂಗೇರಿ. ಮನೆಯಾಗೆ ಎಮ್ಮೆ ಹಂಗೆ ಬಿದ್ಕಂಡಿದ್ದ ರೇವು ಲೋಕೋಪಯೋಗಿ ಆದ! ಎಂ.ಪಿ. ಎಂಪಿ ಆಗದೇ ಇದ್ದರೂ ಮಂತ್ರಿಗಳಾದ್ರು. ಪ್ರಕಾಸು ಮಿಸ್ಸೆಸ್ಸು ತನ್ನ ಗಂಡ ಅಧಿಕಾರ ಕಳ್ಕೊಂಡಾಗ ಶ್ಯಾನೆ ಬ್ಯಾಸರ ಮಾಡ್ಕೊಂಡು ‘ಈ ಬೆಂಗ್ಳೂರು ಬ್ಯಾಡ ರಾಜಕೀಯನೂ ಬ್ಯಾಡ. ಎಲ್ಲಾ ಸಾಕಾಗೇತಿ ಹೂವಿನ ಹಡಗಲಿ ಸೇರ್ಕಂಡು ಹೂ ಮಾರ್ಕೊಂಡು ಹೊಲ ಬೇಸಾಯ ಹೊಡ್ಕಂಡು ಯಜಮಾನ್ರು ಹಾಯಾಗಿ ಆರೋಗ್ಯವಾಗಿ ಇರ್ತಾರೆ ಬಿಡ್ರಿ’ ಅಂದಿದ್ದರು. ಆದ್ರೆ ಯಜಮಾನ್ರು ಬೆಂಗಳೂರ್ನೂ ಬಿಡ್ಲಿಲ್ಲ. ಅಧಿಕಾರನೂ ಒಲ್ಲೆ ಅನ್ಲಿಲ್ಲ! ಕೊಮಾರ ಕೊಟ್ಟಿದ್ದೇ ‘ಮಹಾಪ್ರಸಾದ’ ಅಂತ ಸ್ವೀಕಾರ ಮಾಡಿದ್ಮೇಲೆ ಉಳಿದ ಗೊಂಚಾಯ್ತಿಗಳ್ದು ಯಾವ ಲೆಕ್ಕ ಬಿಡ್ರಲಾ. ಪ್ರಕಾಸು ಅದೇಟು ಸೋತು ಹೋಗಿದ್ದರೆಂದ್ರೆ ಯಾವುದಾರ ಖಾತೆ ಕೊಟ್ರೂ ಕೊಡದಿದ್ರೂ ಅಷ್ಟೇ ಹೋತು. ಮಂತ್ರಿನಾರ ಮಾಡಿದ್ರಲ್ಲಾ ಅಂತ ಬಿಟ್ಟ ನಿಟ್ಟುಸಿರು ಬಳ್ಳಾರಿ ಕೆಡಿಸೇತಂತ್ರಿ. ಇದತ್ಲಾಗಿರ್ಲಿ ಬಿಡ್ರಿ. ಎಲ್ಲರೂ ದ್ಯಾವರ ಹೆಸರಿನ ಮ್ಯಾಗೆ ಪ್ರಮಾಣವಚನ ಸ್ವೀಕಾರ ಮಾಡಿ ತಿಕ ಮುಚ್ಕೊಂಡು ಕುಂತ್ರೆ ಈ ಸಾಬಿ ಜಮೀರಾ ಮಂತ್ರಿಯಾದ ಖುಸಿನಾಗೆ ಫಾರಿನ್ನೋಗೆ ಬಾಹನ್ ಅಂದೋನಂಗೆ ಇಂಗ್ಲೀಸ್ನಾಗೆ ಪ್ರಮಾಣ ಮಾಡ್ತಾ ತನ್ನ ಅಮ್ಮ ದಾದಿಮಾ ಬೀಬಿ ಬಚ್ಚೆ ಬೆಹನ್ ಜೊತೆನಾಗೆ ಕುಮಾರಸ್ವಾಮಿನೂ ಸೇರಿಸ್ಕೊಂಡು ಪ್ರಮಾಣ ಮಾಡೋದೆ! ತಾನು ನಿಂತ ಫ್ಲೋರು ಕುಡಿಯೋ ನೀರು ಉಸಿರಾಡೋ ವಿಂಡು ಕಡ್ಡಾಯವಾಗಿ ಆಡ್ಲೇಬೇಕಾದ ಬಡಪಾಯಿ ಕನ್ನಡ ಲಾಂಗ್ವೇಜು ಎಲ್ಲಾದ್ನೂ ಮರೆತು ಸಿ‌ಎಂ ಕಾಲಿಗೆ ಡೈ ಹೊಡೆಯೋದೆ! ವಾಟಾಳು ವಿರೋಧ ಪಕ್ಷದೋರೆಲ್ಲಾ ಸೇರಿ ಸಾಬಿ ಮೂತಿಗೆ ಇಕ್ಕಿದ ಮ್ಯಾಗೆ ‘ನನಗೆ ನನ್ನ ಅಬ್ಬ ಜಾನ್ ನೆಟ್ಟಗೆ ಉರುದು ಇಂಗ್ಲೀಸು ಕಂಡ ಮೂರ್ನೂ ಕಲಿಸ್ನಿಲ್ಲ ಮಾಫ್‍ಕರ್ನಾ’ ಅಂತ ಅತ್ತ ಪಗ್ಲಕಹಿಂಕಾ. ಮಂತ್ರಿ ಸೀಟು ಸಿಕ್ಕೋರ್ದು ಈ ಪಾಡಾದ್ರೆ ಸಿಗದೋರ್ದು ನಾಯಿಪಾಡು ಕಣ್ರಿ. ಮಂತ್ರಿ ಆಗೇ ಬಿಟ್ಟೆ ಅನ್ಕಂಡು ಹೊಸಾ ಅಂಗಿ ಪ್ಯಾಂಟು ಇಕ್ಕಂಡು ಬೆಂಗಳೂರಿಗೆ ಹೊಂಡಾಕೆ ಚನ್ನಗಿರಿ ಬಸ್ ಸ್ಟಾಂಡ್ನಾಗೆ ಬಸ್ ಗಾಗಿ ಕಾದುನಿಂತ ಚನ್ನಗಿರಿ ಚೆಲುವ ಪಟೇಲ ಪುತ್ರ ಮಹಿಮಾ, ಕೊಮಾರಸಾಮಿ ಗೋಡ್ರ ಮಕ್ಕಳು ಸಿ‌ಎಂ, ಮಂತ್ರಿ ಎಲ್ಲಾ ಆಗ್ಬೋದು ಪಟೇಲನ ಮಗ ಮಂತ್ರಿಯಾಗಬಾರ್ದ ಅಂತ ರೇಗಿ ಪ್ರಧಾನ ಕಾರ್ಯದರ್ಶಿ ಪ್ಲೇಸ್‍ಗೆ ರಾಜೀನಾಮೆ ಒಗದದ್ದು ಆತು. ಕುಮಾರಣ್ಣನ ಹಿಂದೆ ಮುಂದೆ ರೌಂಡ್ ಹೊಡಿತಿಪ್ಪ ಬಿಸಿ ಪಾಟೀಲನೆಂಬ ನಟ ಭಯಂಕರ ಡಿಪ್ರೆಸ್ ಆಗಿ ಎಗೇನ್ ಸಿನಿಮಾ ಲ್ಯಾಂಡ್ನಾಗೆ ಲ್ಯಾಂಡ್ ಆಗವ್ನೆ. ಜಿ.ಟಿ.ದ್ಯಾವೇಗೋಡಗಂತೂ ಅಲರ್ಜಿಯಾಗಿ ಮೈಯಲ್ಲಾ ಗುಳ್ಯಾಗಿ ಜಿಟಿ ಜಿಟಿ ಅನ್ಲಿಕತ್ತಾನೆ. ಬಿಜೆಪಿನಾಗೂ ಅತೃಪ್ತ ಅತ್ಮಗಳಾದ ಸಂಕ್ರಲಿಂಗೇಗೌಡ, ಅರಗಂ, ವಿಸ್ವೇಸ್ವರ ಹೆಡ್ಡೆ ಕಾಗೇರಿ ತರಾ ಸೀನಿಯರ್ಸ್ ಯಡೊರಿ ಮಾಯಾಜಾಲದಿಂದಾಗಿ ಮಂತ್ರಿಯಾಗದೆ ಟಿವಿನಾಗೆ ಬಿಕ್ಕಿ ಬಿಕ್ಕಿ ಅಳ್ಳಿಕತ್ತಾರ್ರಿ. ಇಂಥೋರೆಲ್ಲಾ ಮೊನ್ನೆ ನೈಸ್ ಕಂಪ್ನಿ ಖೇಣಿ ಇಟ್ಕಂಡ ಡಿನ್ನರ್ಗೆ ಸಾಗಹಾಕಿ ಸಮಾಧಾನ ಮಾಡ್ತಾ ಅವ್ರೆ ಯಡೂರಿ. ಅದ್ರೆ ಇನ್ನೊಂದು ಪಾರ್ಟಿ ರಾಂಗ್ ಆಗೈತೆ. ‘ಅಂದರೂ ತಿಂಟಾರು ವೀರು ತಿನ್ನದಾನಿಕಿ ಫೋತೆ ತಪ್ಪೇಮಂಡಿ? ಮನ ಸದಾನಂದ ಗೋಡ್ರಂತ ಚೂಸ್ಕೊಂಟಾರು ಲೇಮಂಡಿ’ ಅಂತ ನೆತ್ತಿ ಸವರ್ತಾ ಅವ್ನೆ ವೆಂಕಯ್ಯನಾಯ್ಡು. ಇದೆಂತ ಮಂತ್ರಿ ಮಂಡ್ಲ ಇಸ್ತರಣೇರಿ! ಮೂವತ್ತು ಮೂರು ಪರ್ಸೆಂಟ್ ಹೆಣ್ಣು ಮಕ್ಕಳಿಗೆ ಅಂತ ಬಾಯಾಗೆ ಬೆಲ್ಲ ಸುರಿಸೋ ಈ ಗಂಡಸ್ರ ಎದೆನಾಗ ಕತ್ತರಿ ಐತೆ. ತೆನೆಹೊತ್ಕಂಡೇ ಮಹಿಳೆ ಊರು ತುಂಬಾ ಅಲಿಬೇಕೇನ್ರಿ? ಅವಳಿಗೆ ಮಂತ್ರಿ ಪೋಸ್ಟ್ ಕೊಡಬಾರ್ದಾ? ಇನ್ನು ಕಮಲದ ಗುರುತಿನ ಭಂಡ ಗಂಡಸರು ಬರೀ ನಮ್ಗೆ ಕಮಲ ಮೂಡಿಸಿದ್ರಾತೇನ್ರಿ? ಕುರ್ಚಿ ಬಿಟ್ಟು ಕೊಡೋದು ಬ್ಯಾಡ್ವಾ? ಇದು ಸೋಸಣೆ ಅಂತ ಮಹಾ ಇಸ್ತ್ರೀ ಉಮಾಶ್ರೀ ರಾಣಿಸತೀಸು ಇಮ್ಲಾಗೋಡ ಲೀಲಾದೇವಜ್ಜಿ ಅಧಿವೇಶನ್ದಾಗೆ ಕೂಗಾಡಿದ್ದೇ ಬಂತು. ‘ಮುಂದಿನದಪ ನೋಡೋಮಾ ಸುಮ್ಗಿರಿ’ ಅಂದು ಮೂಗಿಗೆ ತುಪ್ಪ ಹಚ್ಚಿದ ಮಾಚಾಣ ಕೊಮಾರ. ಇದೆಲ್ಲ ಕಂಡ ಮೋಟಮ್ಮ ಜನಪದ ಗೀತೆ ಕಟ್ಟಿ ಸ್ತ್ರೀ ಸೋಸಣೆ ವಿರುದ್ದ ಮುಂದಿನ ಮೀಟಂಗ್ನಾಗ ಗಾನಾ ಹಾಡ್ತೀವ್ನಿ ಅಂತ ಮುಸಿ ಮುಸಿ ನಕ್ಕರಂತೆ. ಜೆ.ಡಿ.ಎಸ್. ಬಿಬೆಪಿನೋರ ಮಂತ್ರಿಮಂಡಲ ಇಸ್ತರಣೆ ದಶಾವತಾರಾವ ನೋಡಿದ ಸಿದ್ದು, ಖೇಣಿಯ ಫೇಣಿ ಊಟ ಜಡಿದು ಬಂದ ಬಿಜೆಪಿಗರ ಕೂಳಬಾಕತನ ಕಂಡು ಹೌಹಾರಿ, ‘ಬಿಜೆಪಿ ಡಿಗ್ರೇಡ್ ಆಗ್ತಿರೋದ್ಕೆ ಇದೇರಿ ಸಿಂಬಲ್’ ಅಂತ ಹಲ್ಕಿರಿತಾ ಡೆಲ್ಲಿ ಫ್ಲೈಟ್ ನತ್ತಿದ್ದು ಸಿಳ್ಳಲ್ಲಂತ್ರಿ.

ಸಿದ್ದುವೀಗ ಕಾಂಗ್ರಸ್ ಸೇರಕಂತಾರೆ ಅಂಬೋ ನ್ಯೂಸು ಕೆಟ್ಟ ಊಸಿನಂಗೆ ನಾತ ಹಬ್ಬಿಸಿದ್ರೂ ಡೆಲ್ಲಿಗೋಗಿ ಆಂಟನಿ, ಮೇಡಂ ಸೋನಿ ಸಂಗಡ ಮುಲಾಕಾತ್ ಮಾಡಿ ಬಂದ್ರೂವೆ, ‘ಅವರು ಅಫರ್ರೂ ಮಾಡಿಲ್ಲ ನಾನು ಬೆಗ್ಗರ್ರೂ ಆಗಿಲ್ಲ’ ಅಂತ ಹುಸಿ ಸ್ವಾಭಿಮಾನ ತೋರ್ತಾ ಅವ್ರೆ. ’ಡಿಸಿ‌ಎಂ ಆಗಿದ್ದೋರು ಮಂತ್ರಿ ಆಗೋದಾದ್ರೆ ಪ್ರಧಾನಿ ಆಗಿದ್ದೋರು ಸಿ.ಎಂ. ಯಾಕ್ ಆಗಬಾರ್ದು ಅನ್ನೋ ಪ್ರಶ್ನೆ’ ಗೋಡ ತಲೆಯಾಗೆ ಈಗ ಹುಳುವಾಗಿ ಕಾಡ್ಲಿಕತ್ತವೆ’ ರಾಜಕೀಯ್ದಾಗೆ ಏನು ಬೇಕಾದ್ರು ಆಯ್ತದೆ . ಕೇಳೋರು ಯಾರ್ರಿ?
*****
( ದಿ. ೧೩-೦೭-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲಾಚೆಯ ಮೌನ
Next post ಮಕಮಲ್ಲಿನ ಪಕ್ಷಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys